NEWS - 15-04-2009 Kannadaprabha  
  ಬಿಜೆಪಿಗೆ ಸೋಲಿನ ಭೀತಿಯೇ ಇಲ್ಲ: ಶೋಭಾ ಕರಂದ್ಲಾಜೆ  
 
ದವಣಗೆರೆ: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸೋಲಿನ ಭೀತಿಯೋ ಇಲ್ಲ. ಸೋಲಿನ ಭೀತಿಯಲ್ಲಿರುವ ವಿರೋಧ ಪಕ್ಷಗಳು ಬಿಜೆಪಿಯ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತಿವೆ ಎಂದು ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವೆ ಶೋಭಾ ಕರಂದ್ಲಾಜೆ ದೂರಿದ್ದಾರೆ. ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸೋಲಿನ ಭೀತಿಯಲ್ಲಿರುವ ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಹತಾಶೆಗೊಂಡಿರುವುದಲೇ ಅಲ್ಲದೆ, ಅಪಪ್ರಚಾರಕ್ಕಿಳಿದಿವೆ ಎಂದರು
 
   
     
  NEWS - 13-04-2009 Kannadaprabha  
  ಗಣಿಯೂ ಇಲ್ಲ, ಗುಟ್ಯಾವೂ ಇಲ್ಲ : ಸಿದ್ದೇಶ್ವರ್ ಸ್ಪಷ್ಟನೆ  
 

ಹೊನ್ನಾಳಿ: ಕಾಂಗ್ರೆಸ್ ಅಭ್ಯರ್ಥಿ ಎಸ್.ಎಸ್. ಮಲ್ಲಿಕಾರ್ಜುನ್ ಇನ್ನೊಬ್ಬರ ಬಗ್ಗೆ ಸುಳ್ಳು ಆರೋಪ ಮಾಡುವುದನ್ನು ಬಿಡಬೇಕು ಎಂದು ಬಿಜೆಪಿ ಅಭ್ಯರ್ಥಿ ಜಿ.ಎಂ ಸಿದ್ದೇಶ್ವರ್ ಕಿವಿಮಾತು ಹೇಳಿದರು. ಶನಿವಾರ ತಾಲೂಕಿನ ಸುಂಕದಕಟ್ಟೆ ಗ್ರಾಮದಲ್ಲಿ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಅವರು, ತಾವು ಇನ್ನೊಬ್ಬರ ಬಗ್ಗೆ ಎಂದಿಗೂ ಮಾತನಾಡಲು ಹೋಗುವುದಿಲ್ಲ. ಬದಲಿಗೆ ಜನತೆಯ ಕಷ್ಟ ಸುಖಗಳಿಗೆ ಸರಿಯಾಗಿ ಸ್ಪಂದಿಸುತ್ತೆನೆ. ಬಿಜೆಪಿ ಈ ಹಿಂದೆ ಕೇಂದ್ರದಲ್ಲಿ, ಈಗ ರಾಜ್ಯದಲ್ಲಿ ಮಾಡಿದ ಅಬಿವೃದ್ಧಿ ಮುಂದಿಟ್ಟುಕೊಂಡು ಮತ ಯಾಚನೆ ಮಾಡುತ್ತೇನೆ ಎಂದು ಹೇಳಿದರು.

 
   
 
  NEWS - 11-04-2009 Kannadaprabha  
  ಸಿದ್ದೇಶ್ವರ ಪರ ರೇಣುಕಾಚಾರ್ಯ ಮತಯಾಚನೆ  
 
ಹೊನ್ನಾಳಿ: ತಾಲೂಕಿನ ಹೊಳೆಹರಳಹಳ್ಳಿಯಲ್ಲಿ ಗುರುವಾರ ಶಾಸಕ ಹಾಗೂ ಹಟ್ಟಿ ಚಿನ್ನದ ಗಣಿ ಅಧ್ಯಕ್ಷ ಎಂ.ಪಿ. ರೇಣುಕಾಚಾರ್ಯ ಅವರು ಪಕ್ಷದ ಹಿರಿಯ ಮುಖಂಡರೊಂದಿಗೆ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಜಿ.ಎಂ. ಸಿದ್ದೇಶ್ವರ ಪರ ಮತಯಾಚನೆ ಮಾಡಿದರು ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಹಿಂದೆ ಕೇಂದ್ರದಲ್ಲಿ ವಾಜಪೇಯಿ ಅವರ ನೇತೃತ್ವದಲ್ಲಿ ಎನ್‍ಡಿಎ ಸರ್ಕಾರ ಮಾಡಿದ ಜನಪರ ಕಾರ್ಯಕ್ರಮಗಳ ಬಗ್ಗೆ ಹಾಗೂ ಪ್ರಸ್ತುತ ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಕೈಗೊಂಡ ಹತ್ತು ಹಲವು ಯೋಜನೆಗಳ ಬಗ್ಗೆ ಜನರಿಗೆ ತಿಳಿಸಿದರು.

ಹತ್ತಾರು ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಹಾಗೂ ಇತರೆ ಪಕ್ಷಗಳ ಆಡಳಿತ ವೈಕರಿಯನ್ನು ಕಟುವಾಗಿ ಟೀಕಿಸಿದರು. ಮತಯಾಚನೆ ಕಾರ್ಯಕ್ರಮದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಎ.ಬಿ. ಹನುಮಂತಪ್ಪ, ಯುವ ಮುಖಂಡ ಪ್ರಭು, ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಶಾಂತರಾಜ್ ಪಾಟೀಲ್ ಇತರರು ಇದ್ದರು. ಇಂದು ಸಿದ್ದೇಶ್ವರ್ ಪ್ರಚಾರ ಚನ್ನಗಿರಿ: ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ.ಎಂ. ಸಿದ್ದೇಶ್ವರ್ ಏ.೧೦ಕ್ಕೆ ತಾ.ನ ಅಮ್ಮನಗುಡ್ಡದ ಕುಕ್ಕುವಾಡೇಶ್ವರ ದೇವಿಗೆ ಪೊಜೆ ಸಲ್ಲಿಸಿ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿವರು.

ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ರುದ್ರಸ್ವಾಮಿ ಸೇರಿದಂತೆ ಕಾರ್ಯಕರ್ತರು ಹೊಸಳ್ಳಿ, ಶಿವಾಜಿನಗರ, ಜೋಳದಾಳ್, ಗಾಣದಕಟ್ಟೆ, ಗೋಪನಾಳ್, ಹನುಮಂತನಗರ, ಹರೊನಹಳ್ಳಿ, ಅಜ್ಜಿ ಹಳ್ಳಿ, ಸುಣಿಗೆರೆ, ಮಾವಿನಕಟ್ಟೆ, ಮಾದೇನಹಳ್ಳಿ, ಬಸವಾಪುರ, ಗುರುರಾಜಪುರ, ಬಿಆರ್‌ಟಿ ಕಾಲೊನಿ, ಹಿರೇಮಳಲಿ, ಮುದಿಗೆರೆ, ಚಿಕ್ನೋಲಿಕೆರೆ, ದೋಣೆಹಳ್ಳಿಗಳಲ್ಲಿ ಪ್ರಚಾರ ನಡೆಸುವರು.
 
     
  NEWS - 05-04-2009 Kannadaprabha  
   
 
ಹೊನ್ನಾಳಿ: ಸಂಸದರು ಎಂದರೆ ಕೇವಲ ದಿಲ್ಲಿಯಲ್ಲಿ ಕುಳಿತು ಆಡಳಿತ ನಡೆಸುವುದಲ್ಲ. ಬದಲಿಗೆ ಹಳ್ಳಿಗೆ ಆಗಮಿಸಿ ಗ್ರಾಮೀಣ ಜನತೆಯ ಸ್ಥಿತಿಗತಿಗಳ ಸುಧಾರಣೆಗೆ ಕೆಲಸ ಮಾಡಬೇಕು ಎಂದು ಮೂದಲು ತೋರಿಸಿಕೊಟ್ಟವರು ಮಾಜಿ ಸಂಸದ ದಿ.ಜಿ.ಎಂ ಮಲ್ಲಿಕಾರ್ಜುನಪ್ಪನವರು. ತಂದೆ ಮಾರ್ಗವನ್ನೆ ಅವರ ಪುತ್ರರಾದ ಜಿ.ಎಂ.ಸಿದ್ದೇಶ್ ಅವರು ಪಾಲಿಸುತ್ತಾ ತಮ್ಮ ಕ್ಷೇತ್ರದ ಪ್ರತಿ ಹಳ್ಳಿಗರ ಬಳಿ ಬಂದು ಕೆಲಸ ಮಾಡಿದ್ದಾರೆ ಎಂದು ಎಂ.ಪಿ ರೇಣುಕಾಚರ್ಯ ಹೇಳಿದರು. ಗುರುವಾರ ಮಧ್ಯಾಹ್ನ ತಾಲೂಕಿನ ರಾಂಪುರದಲ್ಲಿ ಆಯೋಜಿಸಿದ್ದ ಸಾಸ್ವೇಹಳ್ಳಿ ಜಿಲ್ಲಾ ಪಂಚಯಿತಿ ಕ್ಷೇತ್ರವ್ಯಾಪ್ತಿಯ ಬಿಜೆಪಿ ಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪ ಅವರು ಇಡಿ ರಾಜ್ಯದ ಅಭಿವೃದ್ಧಿಗೆ ಕೋಟಿಗಟಲೆ ಅನುದಾನ ನೀಡುತ್ತಾ ಅಭಿವೃದ್ಧಿಗೆ ನಿರಂತರ ಶ್ರಮಿಸುತ್ತಾ ದೇಶದಲ್ಲಿ ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ. ಕೇಂದ್ರದಲ್ಲಿ ದೇಶದ ಹಿತಾಸಕ್ತಿ ಕಾಯಕ ಸರ್ಕಾರದ ರಚನೆಗೆ ಜನತೆ ಬಿಜೆಪಿ ಬೆಂಬಲಿಸುವಂತೆ ಕಾರ್ಯಕರ್ತರು ಅವರ ಮನವೊಲಿಸಬೇಕು ಎಂದು ಕರೆ ನೀಡಿದರು. ಬಿಜೆಪಿ ತಾಲೂಕು ಅಧ್ಯಕ್ಷ ಎ.ಬಿ ಹನುಮಂತಪ್ಪ. ತಾಲೂಕಿನ ಅಭಿವೃದ್ದಿಗೆ ಸಂಸದ ಜಿ.ಎಂ. ಸಿದ್ದೇಶ್ ಅವರ ಕೊಡುಗೆಗಳ ಕುರಿತು ಮಾತನಾಡಿದರು. ಸಾಸ್ವೇಹಳ್ಳಿ ಹೋಬಳಿ ಬಿಜೆಪಿ ಮುಖಂಡ ಗದ್ದಿಗೇಶ, ತಾಲೂಕು ಪಂಚಾಯಿತಿ ಸದಸ್ಯ ಬಸವರಾಜಪ್ಪ, ಎಸ್ಸಿ ಎಸ್ಟಿ ಘಟಕದ ಮುಖಂಡ ಹಾಲೇಶ್ ಉಪಸ್ಥಿತರಿದ್ದರು.
 
     
  NEWS - 04-04-2009 Kannadaprabha  
   
     
  NEWS - 03-04-2009 Kannadaprabha  
  ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ  
 
ದಾವಣಗೆರೆ: ಲೋಕಸಭಾ ಕ್ಷೇತ್ರಕ್ಕೆ ಚುನಾವಣಾ ಅಧಿಸೂಚನೆಯನ್ನು ಏ.೨ ರಂದು ಹೊರಡಿದ್ದು ಇಂದೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಅರಂಭಗೊಳ್ಲಲಿದೆ ಎಂದು ಜಿಲ್ಲಾಧಿಕಾರಿ ಎನ್.ಮಂಜುನಾಥ ಪ್ರಸಾದ್ ತಿಳಿಸಿದ್ದಾರೆ. ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಮತ್ತವರ ಬೆಂಬಲಿಗರು ಸಂಚಾರಕ್ಕೆ, ಪ್ರಚಾರಕ್ಕೆ ಬಳಸುವ ವಾಹನಗಳಿಗೆ ಈ ಪ್ರಾಧಿಕಾರದಿಂದ ನೀಡಲಾಗುವ ಅಧಿಕೃತ ವಾಹನ ಪರವಾನಗಿ ಪಡೆದಿರಬೇಕು ಎಂದಿದ್ದಾರೆ.
 
     
  NEWS - 02-04-2009 Kannadaprabha  
  ಸಂಸದ ಸಿದ್ದೇಶ್ವರ್ ಬಿರುಸಿನ ಪ್ರಚಾರ  
 
ದಾವಣಗೆರೆ: ದೇಶದಲ್ಲಿ ನೆಡೆಯುತ್ತಿರುವ ಭಯೋತ್ಪಾದನೆ, ಉಗ್ರರ ಉಪಟಳ ಹೆಚ್ಚಾಗುವುದಕ್ಕೆ ಕಾಂಗ್ರೆಸ್ ಪಕ್ಷವೇ ಕಾರಣ ಎಂದು ಸಂಸದ ಜಿ.ಎಂ. ಸಿದ್ದೇಶ್ವರ್ ದೂರಿದ್ದಾರೆ. ಜಗಳೂರು ತಾ.ಪಲ್ಲಾಗಟ್ಟೆ ಗ್ರಾಮದಲ್ಲಿ ಮಂಗಳವಾರ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು , ಇದಕ್ಕಾಗಿ ಕೇಂದ್ರದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವಂತೆ ಮನವಿ ಮಾಡಿದರು.

ಮಾಜಿ ಶಾಸಕ ಟಿ.ಗುರುಸಿದ್ದನಗೌಡ, ತಾಲೂಕಿನ ೨೨ ಕೆರೆಗೆ ನೀರು ತುಂಬಿಸುವ ಯೋಜನೆ ರೂಪಿಸಿ, ಬರಗಾಲದ ಬೇಗೆಯಿಂದ ಜನರ ಪಾರು ಮಾಡಿರುವ ಬಿಜೆಪಿ ಬೆಂಬಲಿಸುವ ಮೂಲಕ ತಾಲೂಕಿನ ಸಮಗ್ರ ಪ್ರಗತಿಗೆ ಜನತೆ ಸಹಕರಿಸಬೇಕು ಎಂದರು.ತಾಲೂಕು ಬಿಜೆಪಿ ಅಧ್ಯಕ್ಷ ಶಿವಕುಮಾರಯ್ಯ, ದಿಬಗೂರು ಬಸವರಾಜ್, ಲೋಕಣ್ಣ ಇದ್ದರು. ಇದೇ ವೇಳೆ ಕಾಂಗ್ರೆಸ್ ಮುಖಂಡರಾದ ಸೋಮಣ್ಣ, ಭಗವಂತಪ್ಪ, ಹನುಮಂತಪ್ಪ, ದಾಸಪ್ಪ ಬಿಜೆಪಿಗೆ ಸೇರ್ಪಡೆಯಾದರು.ಸ್

ವಾಲ್ಮೀಕಿ ಪೀಠಕ್ಕೆ ಭೇಟಿ ಹರಿಹರ:
ತಾಲೂಕಿನ ರಾಜನಹಳ್ಳಿ ವಲ್ಮೀಕಿ ಗುರುಪೀಠದ ಮಠಕ್ಕೆ ಮಂಗಳವಾರ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಭೇಟಿ ನೀಡಿ, ಶ್ರೀ ಪ್ರಸನ್ನಾನಂದ ಸ್ವಾಮೀಜಿಯವರಿಂದ ಅಶೀರ್ವಾದ ಪಡೆದರು. ಮಠಕ್ಕೆ ಅಗಮಿಸಿ ಶ್ರೀ ಪುಣ್ಯನಂದ ಪುರಿ ಸ್ವಾಮೀಜಿ ಗದ್ದುಗೆಗೆ ಪೊಜ ಸಲ್ಲಿಸಿದರು. ಮುಖಂಡರಾದ ಎಚ್. ಎಸ್. ಶಿವಶಂಕರ್, ಕೆ.ಚಂದ್ರಪ್ಪ, ನಾಗೇಶ್ವರರಾವ್, ಕೋಳೆನಹಳ್ಳಿ ಸತೀಶ್, ಟಿ.ದಾಸಕರಿಯಪ್ಪ ಕೆ.ನಾರಾಯಣ, ಹೂವಿನಮಡುಚಂದ್ರಪ್ಪ ಇದ್ದರು.

ಕನ್ನಡ ಸಂಘಟನೆ ಪರ ಸಂಡೂರ್ ಅಭ್ಯರ್ಥಿ ದಾವಣಗೆರೆ:
ನಾಡು, ನಾಡು, ನುಡಿ, ಗಡಿ, ಜಲದ ಜ್ವಲಂತ ಸಮಸ್ಯ ನಿವಾರಿಸುವ ಸದುದ್ದೇಶದಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ದಿಸುತ್ತಿರುವುದಾಗಿ ಕನ್ನಡ ಪರ ಸಂಘಟನೆಗಳ ಅಭ್ಯರ್ಥಿ, ಮಾಯಕೊಂಡದ ಕನ್ನಡ ಯುವ ಶಕ್ತಿ ಕೇಂದ್ರದ ಅಧ್ಯಕ್ಷ ರಾಜಶೇಖರ್ ತಿಳಿಸಿದ್ದಾರೆ. ನಗರ್‍ಅದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಮಾಯಕೊಂಡ ಗ್ರಾಮದ ಕನ್ನಡ ಯುವಕ್ತಿ ಕೇಂದ್ರದ ಕಾರ್ಯಕರ್ತನಾಗಿ, ಅಧ್ಯಕ್ಷನಾಗಿ ಸೇವೆ ಸಲ್ಲಿಸುತ್ತಿದ್ದು, ಇಂಜಿನಿಯರಿಂಗ್ ಪದವೀಧರರಾದ ತಾವು ಕನ್ನಡ ಸೇವೆಗಾಗಿ ಜಿಲ್ಲಾಡಳಿತದಿಂದ ರಾಜೋತ್ಸವ ಪ್ರಶಸ್ತಿ ಪಡೆದಿರುವುದಾಗಿ ಅವರು ಮಾಹಿತಿ ನೀಡಿದರು. ರಾಜಶೇಖರ್, ಜಗದೀಶ, ಟಿ.ಪಿ. ರೇವಣಸಿದ್ದಪ್ಪ, ರಾಘ್‍ವೇಂದ್ರ ಮಾಯಕೊಂಡ, ಡಿ.ಟಿ. ಕೃಷ್ಣಮೂರ್ತಿ, ಶ್ರೀನಿವಾಸ್‍ಗಾಳೇರ್ ಇದ್ದರು.

ನಿವೃತ್ತ ಜಿಲ್ಲಾಧಿಕಾರಿ ಡಾ.ಪರಮೇಶ್ವರಯ್ಯ
ದಾವಣಗೆರೆ: ನಿವೃತ್ತ ಜಿಲ್ಲಾಧಿಕಾರಿ, ಯೋಗ ಶಿರೋಮಣಿ ಡಾ.ವೈ.ಎಂ.ಪರಮೇಶ್ವರಯ್ಯ(೯೦) ಅವರು ದಾವಣಗೆರೆ ವಿನೋಬ ನಗರದಲ್ಲಿ ಮಂಗಳವಾರ ನಿಧನರಾದರು. ಮೃತರ ನಾಲ್ವರು ಪುತ್ರರು, ಮೂವರು ಪುತ್ರಿಯರು ಸೇರಿದಂತೆ ಅಪಾರ ಬಂದು-ಬಳಗವನ್ನು ಅಗಲಿದ್ದಾರೆ. ಏ. ೧ರ ಬುಧವಾರ ಬೆಳಗ್ಗೆ ೧೧ ಗಂಟೆಗೆ ನಗರದ ಪಿ.ಬಿ. ರಸ್ತೆಯಲ್ಲಿರುವ ವೈಕುಂಠ ಧಾಮದಲ್ಲಿ ಮೃತರ ಅಂತ್ಯಕ್ರಿಯೆ ನೆಡೆಯಲಾಗಿತ್ತು ಎಂದು ಅವರು ಕುಟುಂಬ ಮೂಲಗಳು ತಿಳಿಸಿವೆ.
 
     
  NEWS - 27-03-2009  
  ಬಿಜೆಪಿಯಿಂದ ಜಗಳೂರು ತಾಲ್ಲೂಕಿನ ಸೊಕ್ಕೆಗ್ರಾಮದಲ್ಲಿ ಬಿರುಸಿನ ಪ್ರಚಾರ.  
 
ಜಗಳೂರು : ಲೋಕಸಭಾ ಚುನಾವಣೆ ನಿಮಿತ್ತ ಜಗಳೂರು ತಾಲ್ಲೂಕಿನ ಸೂಕ್ಕೆ ಗುರುಸಿದ್ದಾಪುರ, ಲಕ್ಕಾಂಪುರ ಸೇರಿದಂತೆ ಇತರೆ ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ ಪರ ಅವರ ಪುತ್ರ ಜಿ.ಎಂ.ಎಸ್. ಅನಿತ್ ಕುಮಾರ್ ,ತಾಲ್ಲೂಕು ಬಿಜೆಪಿ ಘಟಕದಿಂದ ಬಿರುಸಿನ ಪ್ರಚಾರ ನಡೆಸಿದರು.

ಜಿ.ಎಂ.ಎಸ್.ಅನಿತ್ ಸೊಕ್ಕೆ ಗ್ರಾಮದಲ್ಲಿ ಮಾತನಾಡಿದ ಅವರು ಕ್ಷೇತ್ರದ ಎಲ್ಲಾ ಹಳ್ಳಿಗಳಿಗೂ ಭೇಟಿ ನೀಡಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ.
ಸಂಸದರ ಅನುದಾನವನ್ನ ಸಮರ್ಪಕವಾಗಿ ಬಳಸಿಕೂಂಡು ಕ್ಷೇತ್ರದ ಅಭಿವೃದ್ದಿಗೆ ಸಂಸದ ಜಿ.ಎಂ.ಸಿದ್ದೆಶ್ ಶ್ರಮಿಸಿದ್ದು ಅವರಿಗೆ ಚುನಾವಣೆಯಲ್ಲಿ ಮತ ನೀಡಿ ಹೆಚ್ಚಿನ ಬಹುಮತದಿಂದ ಆಯ್ಕೆ ಮಾಡುವ ಮೂಲಕ ಕ್ಷೇತ್ರದ ಗ್ರಾಮಗಳ ಅಭಿವೃದ್ದಿ ಮಾಡಲು ಮತ್ತೋಮ್ಮೆ ಅವಕಾಶ ಕಲ್ಪಿಸಬೇಕೆಂದು ಅವರು ಸೊಕ್ಕೆ ಗ್ರಾಮಸ್ಥರಲ್ಲಿ ಮನವಿ ಮಾಡಿದರು.

ಸಮಗ್ರ ಭಾರತದ ಅಭಿವೃದ್ದಿ ಬಿಜೆಪಿಯಿಂದ ಮಾತ್ರ ಸಾಧ್ಯ,, ಕಾಂಗ್ರೇಸ್ ನವರಿಗೆ ಚುನಾವಣೆ ಬಂದಾಗ ಮಾತ್ರ ಮತದಾರನ ನೆನಪಾಗುತ್ತದೆ ಎಂದರು. ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಸಾಕಷ್ಟು ಅಭಿವೃದ್ದಿ ಕಾರ್ಯ ಮಾಡಿದ್ದು ರಾಜ್ಯದ ಮತದಾರ ಬಿಜೆಪಿ ಬೆಂಬಲಿಸಿದ್ದಾನೆ ಎಂದರು.

ಬಿಜೆಪಿ ಮುಖಂಡ ಹೆಚ್.ಪಿ.ರಾಜೇಶ್ ಮಾತನಾಡಿ ದಾವಣಗೆರೆ ಲೋಕಸಭಾ ಕ್ಷೇತ್ರದ ಹಳ್ಳಿಗಳ ಅಭಿವೃದ್ದಿ ಜೂತೆಗೆ ಪ್ರತಿ ಹಳ್ಳಿಗಳಿಗೂ ಭೇಟಿ ನೀಡಿದ ಏಕೈಕ ಸಂಸದ ಸಿದ್ದೇಶ್ ಅವರನ್ನ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಿಸುವಂತೆ ಮನವಿ ಮಾಡಿದರು. ಬಿಜೆಪಿ ತಾಲೂಕಾಧ್ಯಕ್ಷ ಶಿವಕುಮಾರ ಸ್ವಾಮಿ, ಮುಖಂಡರಾದ ಎಚ್.ಪಿ.ರಾಜೇಶ್. ಟಿ.ಜಿ.ಪ್ರವೀಣ್ ಕುಮಾರ್, ಎಸ್.ಬೋರಪ್ಪ ನಾಯಕ, ಸಿ.ಲಕ್ಷ್ಮಣ್, ಸೊಕ್ಕೆ ಸಿದ್ದಪ್ಪ, ಭೀಮಪ್ಪ, ಪಕೀರಪ್ಪ, ಟಿ.ದಾಸಪ್ಪ, ಲಿಂಗಣನಹಳ್ಳಿ ದೇವೇಂದ್ರಪ್ಪ, ನಾಗರಾಜ್ ಇತರರು ಪ್ರಚಾರದಲ್ಲಿ ಭಾಗವಹಿಸಿದ್ದರು.

ಜಗಳೂರು ಚಿತ್ರ ೧ : :ಲೋಕಸಭಾ ಚುನಾವಣೆ ನಿಮಿತ್ತ ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ ಪರ ಮುಖಂಡರಾದ ಜಿ.ಎಂ.ಎಸ್.ಅನಿತ್, ಹೆಚ್.ಪಿ.ರಾಜೇಶ್ ಇತರರು ತಾಲೂಕಿನ ಸೂಕ್ಕೆ ಗ್ರಾಮದಲ್ಲಿ ಮತ ಯಾಚಿಸಿದರು.

ಜಗಳೂರು ಚಿತ್ರ ೨ ; ಜಗಳೂರು ತಾಲ್ಲೂಕಿನ ಸೂಕ್ಕೆ ಗ್ರಾಮದಲ್ಲಿ ಬಿಜೆಪಿ ಅಭsರ್ಥಿ ಜಿ.ಎಂ.ಸಿದ್ದೇಶ್ ಪರ ತಾಲೂಕು ಬಿಜೆಪಿ ಘಟಕದ ಮುಖಂಡರಾದ ಹೆಚ್.ಪಿ.ರಾಜೇಶ್ ,ಶಿವಕುಮಾರ ಸ್ವಾಮಿ, ಅನಿತ್, ಪ್ರವೀಣ್, ಸಿದ್ದಪ್ಪ ಬಿರುಸಿನ ಪ್ರಚಾರ ನಡೆಸಿದರು.

ಜಗಳೂರು ಚಿತ್ರ ೩ ; ಸಂಸದ ಜಿ.ಎಂ.ಸಿದ್ದೇಶ್ ಪುತ್ರ ಅನಿತ್ ಜಗಳೂರು ತಾಲ್ಲೂಕು ಸೊಕ್ಕೆ ಗ್ರಾಮದಲ್ಲಿ ವೃದ್ದರೊಬ್ಬರನ್ನ ಬಿಜೆಪಿಗೆ ಮತ ಚಲಾಯಿಸುವಂತೆ ಮನವಿ ಮಾಡುತ್ತಿರುವ ದೃಶ್ಯ..

ಜಗಳೂರು ಚಿತ್ರ ೪ : ಜಗಳೂರು ತಾಲ್ಲೂಕಿನ ರಾಷ್ರ್ಟೀಯ ಹೆದ್ದಾರಿ ೧೩ರ ದೊಣ್ಣೆಹಳ್ಳಿ ಬಳಿಯ ತಿರುವಿನಲ್ಲಿ ಬೆಳಿಗ್ಗೆ ೬ ಗಂಟೆ ಸಮಯದಲ್ಲಿ ಲಾರಿ ಒಂದು ಚಳ್ಳಕೆರೆ ಯಿಂದ ಜಗಳೂರು ಕಡೆ ಬರುತ್ತಿದ್ದ ಲಕ್ಷ್ಮೀ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬಸ್‌ನ ಮುಂಭಾಗ ಜಖಂ ಗೊಂಡಿರುವುದು.

ಚಾಲಕ ಬಸವರಾಜ್ ಸೇರಿದಂತೆ ೬ ಜನರಿಗೆ ಗಾಯಗಳಾದ್ದು ಆಸ್ಪತ್ರೆಗೆ ದಾಖಲಿಸಲಾಗಿದ್ದು ಪಿ‌ಎಸ್‌ಐ ಸೋಮ್ಲಾನಾಯ್ಕ್ ಸ್ಥಳಕ್ಕೆ ಭೇಟಿ ನೀಡಿ ದೂರು ದಾಖಲಿಸಿಕೂಂಡಿದ್ದಾರೆ.


 
 
Chitra 1 Chitra 2 Chitra 3 Chitra 4
 
     
  NEWS - 26-03-2009 - Kannadaprabha  
  ಕಾಂಗ್ರೆಸ್ ಅಪಪ್ರಚಾರಕ್ಕೆ ಕಿವಿಗೊಡಬೇಡಿ : ಸಿದ್ದೇಶ್ವರ  
 
ದಾವಣಗೆರೆ: ಲೋಕಸಭೆಗೆ ತಾವು ಆಯ್ಕೆಯಾದ ಹೊಸದರಲ್ಲಿ ಸುಸ್ತಾಗಿ ಅಸ್ಪತ್ರೆ ಸೇರಿದ್ದಕ್ಕೆ, ನನಗೆ ಬ್ರೈನ್ ಬ್ರೈನ್ ಟ್ಯೂಮರ್ ಇದೆ, ಕಾಲು ಹೋಗಿದೆ ಎಂದೆಲ್ಲಾ ಕಾಂಗ್ರೆಸ್ಸಿಗರು ವದಂತಿ ಹರಡಿದ್ದರು. ಇನ್ನೂ ಐದು ಲೋಕಸಭೆ ಚುನಾವಣೆ ಮಾಡುವಷ್ಟು ಶಕ್ತಿ, ಅರೋಗ್ಯ ನನಗಿದೆ ಎಂಬುದನ್ನು ಎದುರಾಳಿಗಳು ತಿಳಿಯಲಿ ಎಂದು ಲೋಕಸಭ ಚುನವಾಣೆ ಬಿಜೆಪಿ ಅಭ್ಯರ್ಥಿ, ಸಂಸದ ಜಿ.ಎಂ.ಸಿದ್ದೇಶ್ವರ್ ಹೇಳಿದ್ದಾರೆ. ನಗರದಲ್ಲಿ ಮಂಗಳವಾರ ಜೆಡಿಎಸ್ ಯುವ ಮುಖಂಡ ಎಚ್.ಎಸ್ ನಾಗರಾಜ ಹಾಗೂ ಬೆಂಬಲಿಗರ ಬಿಜೆಪಿ ಸೇರ್ಪಡೆ ಸಮಾರಂಭದಲ್ಲಿ ಮಾತನಾಡಿದ ಅವರು ,ಕಾಂಗ್ರೆಸ್ ಪಕ್ಷ ಆರಂಭದಲ್ಲಿ ತಮ್ಮ ತಂದೆಗೆ ಆದಂತೆ ನನಗೂ ಬ್ರೈನ್ ಟ್ಯೂಮರ್ ಆಗಿದೆ ಎಂಬ ಸುದ್ದಿ ಹರಡಿತ್ತು ಎಂದು ದೂರಿದರು.

ಕ್ಷೇತ್ರಾದ್ಯಂತ ಐದು ವರ್ಷದಲ್ಲಿ ೧,೮೦೭ ಹಳ್ಳಿಗಳಿಗೆ ಒಟ್ಟು ೩ ಲಕ್ಷ ಕಿ.ಮೀ. ಸುತ್ತಾಡಿ, ಜನರ ಬಳಿ ನಾನು ಹೋಗಿದ್ದೇನೆ. ಕಾಂಗ್ರೆಸ್ಸಿಗರ ಅಪಪ್ರಚಾರಗಳಿಗೆಲ್ಲಾ ಬಿಜೆಪಿ ಕಾರ್ಯಕರ್ತರು, ಸಾರ್ವಜನಿಕರು ಕಿವಿಗೊಡಬಾರದು. ನನ್ನ ಆರೋಗ್ಯ ಗಟ್ಟಿಯಾಗಿದೆ ಎಂದು ಅವರು ಪುನರುಚ್ಚರಿಸಿದರು. ಸಚಿವ ಕರುಣಾಕರ ರೆಡ್ಡಿ ಮಾತನಾಡಿ, ಸಚಿವ ಎಸ್.ಎ.ರವೀಂದ್ರನಾಥ್, ಸಂಸದ ಸಿದ್ದೇಶ್ವರ್ ಮಧ್ಯ ಸರಿಇಲ್ಲ. ಇಬ್ಬರ ಸಂಬಧ ಹಳಸಿದೆಯೆಂದು ಕಾಂಗ್ರೆಸ್ಸಿಗರು ಸುಳ್ಳು ಸುದ್ದಿ ಹರಡುತ್ತಿದ್ದಾರೆ. ಇಂತಹ ರಾಜಕೀಯ ಮಾಡುವವರಿಗೆ ಬಿಜೆಪಿ ಕಾರ್ಯಕರ್ತರು ತಕ್ಕ ಪಾಠ ಕಲಿಸಬೇಕು ಎಂದು ಕರೆ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರವೀಂದ್ರನಾಥ್ ಮಾತನಾಡಿ, ಬಿಜೆಪಿ ಸರ್ಕಾರ ಮಾಡುತ್ತಿರುವ ಅಬಿವೃದ್ಧಿ ಕಾಮಗರಿ, ಜನಪರ ಯೋಜನೆ, ಬಡ ಜನರು, ರೈತರ ಪರ ಕಾರ್ಯಕ್ರಮಗಳ ಬಗ್ಗೆ ಜನರಿಗೆ ಅರಿವಿದೆ. ಲೋಕಸಭ ಚುನಾವಣೆಯಲ್ಲಿ ಬಿಜೆಪಿ ಗೆಲವು ನಿಶ್ಚಿತ. ಭಾರೀ ಮತಗಳ ಅಂತರದಲ್ಲಿ ಜಿ.ಎಂ.ಸಿದ್ದೇಶ್ವರ್ ಕ್ಷೇತ್ರದಿಂದ ಗೆಲ್ಲುವಂತೆ ಕಾರ್ಯಕರ್ತರು ಶ್ರಮಿಸಬೇಕು ಎಂದರು.

ವಿಧಾನಪರಿಷತ್ ಮುಖ್ಯ ಸಚೇತಕ ಡಾ.ಶಿವಯೋಗಿಸ್ವಾಮಿ , ಹಟ್ಟಿ ಚಿನ್ನದ ಗಣಿ ಅಧ್ಯಕ್ಷ ಎಂ.ಪಿ. ರೇಣುಕಾಚಾರ್ಯ, ಶಾಸಕರಾದ ಬಿ.ಪಿ. ಹರೀಶ್ ಗೌಡ, ಮಾಡಾಳ್ ವಿರುಪಾಕ್ಷಪ್ಪ, ದೂಡಾ ಅಧ್ಯಕ್ಷ ಯಶವಂತರಾವ್, ಜಾಧವ್, ಸದಸ್ಯ ಜಿ.ಶಿವಯೋಗಪ್ಪ, ಎಂ.ಬಸವರಾಜ ನಾಯ್ಕ, ಮೇಯರ್ ಉಮಾಪ್ರಕಾಶ, ಉಪ ಮೇಯರ್ ಬಿ.ಲೋಕೇಶ್, ಸದಸ್ಯರಾದ ಪಿ.ಎಸ್.ಜಯಣ್ಣ, ಎಚ್.ಎನ್.ಶಿವಕುಮಾರ್ ಜ್ಯೋತಿ ಸಿದ್ದೇಶ, ಜ್ಯೋತಿ ಪಾಟೀಲ್, ಸುಧಾ ಜಯರುದ್ರೇಶ್, ಎಚ್.ಎನ್.ಕಲ್ಲೇಶ, ಬಿ.ಎಸ್.ಜಗದೀಶ ಮತ್ತಿತರರು ಸಮಾರಂಭದಲ್ಲಿ ಇದ್ದರು.
 
     
NEWS - 25-03-2009 - Udayavani  
 
ಗಾಂಧೀಜಿ ಹೆಸರು ಬಳಕೆ: ಸಿದ್ದೇಶ್ ವಿಷಾದ
ದಾವಣಗೆರೆ, ಮಾ. ೨೪: ನೆಹರೂ ಮನೆತನ, ಇಂದಿರಾ, ರಾಜೀವ್, ಸೋನಿಯ ಹಾಗೂ ರಾಹುಲ್ ಅವರುಗಳು ದೇಶಕ್ಕೆ ಸ್ವಾತಂತ್ರ್ಯಗಳಿದಿಕೊಟ್ಟ ಮಹಾತ್ಮ ಗಾಂಧೀಜಿ ಅವರ ಹೆಸರು ಬಳಸಿ ರಾಜಿಕೀಯ ನೆಡೆಸುತ್ತಿದ್ದಾರೆ ಎಂದು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ ಟೀಕಿಸಿದ್ದಾರೆ, ಹೊನ್ನಾಳಿ ತಾಲೂಕಿನ ಹಿರೇಗೋಣಿಗೆರೆ ಗ್ರಾಮದಲ್ಲಿ ಏರ್ಪಡಿಸಿದ್ದ ಲೋಕಸಭಾ ಚುನಾವಣೆ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಕಳೆದ ವಿಧಾನಸಭೆ ಚುನಾವಣೆ ವೇಳೆ ಹರಪನಹಳ್ಳಿಯಲ್ಲಿ ರಾಹುಲ್ ಮ್ಯಾಜಿಕ್ ನಡೆಯಲಿಲ್ಲ. ದಾವಣಗೆರೆಯಲೂ ಸೋನಿಯಾ ಮ್ಯಾಜಿಕ್ ನಡೆಯದು. ಈ ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸಿ ಎಂದು ಮನವಿ ಮಾಡಿದರು. ಹಟ್ಟಿ ಚಿನ್ನದ ಗಣಿ ಅಧ್ಯಕ್ಷ ಎಂ.ಪಿ. ರೇಣುಕಾಚಾರ್ಯ ಮಾತನಾಡಿ ೫ ವರ್ಷ ಕಾಲ ಜನರಿಗೆ ಮುಖ ತೋರಿಸದ ಎಸ್.ಎಸ್. ಮಲ್ಲಿಕಾರ್ಜುನ್ ಈಗ ಮತ ಕೇಳಲು ಬರುತ್ತಿದ್ದಾರೆ ಎಂದು ವ್ಯಂಗ್ಯವಾಡಿದರಲ್ಲದೆ ಯಡಿಯುರಪ್ಪ ಸರ್ಕಾರ ವಾಲ್ಮೀಕಿ, ಬಣಜಾರು, ಬೋವಿ ಸೇರಿದಂತೆ ಎಲ್ಲಾ ಜನಾಂಗದ ನಿಗಮ ಸ್ಥಾಪಿಸಿ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದರು.

ಮುಖಂಡ ಎ.ಬಿ. ಹನುಮಂತಪ್ಪ, ಜಿಲ್ಲಾ ಉಪಾಧ್ಯಕ್ಷ ಶಿವಲಿಂಗಪ್ಪ, ದಿಡಿಗೂರು ಪಾಲಾಕ್ಷಪ್ಪ, ಚನ್ನವೀರಪ್ಪ, ಮಂಜಪ್ಪ, ಸುರೇಶ್, ಚಾಟಿ ಶೇಖರಪ್ಪ, ಗುರುಪಾದಪ್ಪ ಇನ್ನಿತರರು ಪಾಲ್ಗೊಂಡಿದ್ದರು. ಹರಿಹರದಲೂ ಬಿರುಸಿನ ಪ್ರಚಾರ: ಅಭ್ಯರ್ಥಿ ಸಿದ್ದೇಶ್ವರ ಅವರು ಸೋಮವಾರ ಹರಿಹರ ತಾಲೂಕಿನ ಕೆ.ಬೇವಿನಹಳ್ಳಿ, ಜಿಗಳಿ, ಕೊಕ್ಕನೂರು, ನಿಡಗುಂದಿ, ಮೂಗಿನಗುಂದಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ನಡೆಸಿದರು. ಅವರೊಂದಿಗೆ ಶಾಸಕ ಬಿ.ಪಿ ಹರೀಶ್ ಹಾಜರಿದ್ದು ಅವರು ಮತ ಯಾಚಿಸಿದರು. ಜೆಡಿಎಸ್ ತೊರೆದ ಎಚ್.ಎಸ್.ನಾಗರಾಜ್ ಅವರು ಬಿಜೆಪಿಗೆ ಸೇರ್ಪಡೆಯಾಗಲಿದ್ದು, ಅವರಿಗೆ ಪಕ್ಷದಲ್ಲಿ ಸೂಕ್ತ ಸ್ಠಾನಮಾನ ನೀಡಲಾಗುವುದು ಎಂದು ಅವರು ತಿಳಿಸಿದರು.
 
NEWS - 21-03-2009 - Kannadaprabha
ಸಚಿವರ ಕೆಲಸಕ್ಕೆ ತಕ್ಕಂತೆ ಮತ ನೀಡಿ: ಸಂಸದ ಜೆ.ಎಂ ಸಿದ್ದೇಶ್ವರ್
ಹರಪನಹಳ್ಳಿ : ಕಂದಾಯ ಸಚಿವ ಕರುಣಾಕರ ರೆಡ್ಡಿ ಕಳೆದ ೮ ತಿಂಗಳಲ್ಲಿ ಮಾಡಿದ ಕೆಲಸ ನೋಡಿ ಅದಕ್ಕೆ ತಕ್ಕಂತೆ ಮತ ಚಲಾಯಿಸಿ ಎಂದು ಬಿಜೆಪಿ ಲೋಕಸಭೆ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ್ ಮತದಾರರಲ್ಲಿ ಮನವಿ ಮಾಡಿದರು. ತಾಲೂಕಿನ ವಿವಿಧ ಹಳ್ಳಿಗಳಲ್ಲಿ ಸಂಚರಿಸಿ ಮತಯಾಚನೆ ಮಾಡಿ ಮಾತನಾಡಿದರು. ಗರ್ಭಗುಡಿ ಬ್ರಿಡ್ಜ್‍ಕಮ್ ಬ್ಯಾರೇಜು, ಕೆರೆಗೆ ನದಿ ನೀರು ತುಂಬಿಸುವುದು, ನದಿಯಿಂದ ಅನೇಕ ಹಳ್ಳಿಗೆ ಕುಡಿಯುವ ನೀರಿನ ವ್ಯವಸ್ಠೆ, ರಸ್ತೆ ಅಭಿವೃದ್ಧಿ, ಬಸ್ ಡಿಪೊ ಸೇರಿದಂತೆ ಅಂದಾಜು ೧೨೦ ಕೋಟಿ ರು. ಕಾಮಗಾರಿಗೆ ಕಂದಾಯ ಸಚಿವರು ಚಾಲನೆ ನೀಡಿದ್ದಾರೆ ಎಂದು ಅವರು ಹೇಳಿದರು. ಕರುಣಾಕರ ರೆಡ್ಡಿಯವರು ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವುದರಿಂದ ಜನ ನೆಂಮ್ಮದಿಯಿಂದ ಬದುಕುವಂತಾಗಿದೆ ಎಂದು ಅವರು ತಮ್ಮನ್ನು ಗೆಲ್ಲಿಸಿದರೆ ಸದಾ ಜನರ ಸಂಪರ್ಕದಲ್ಲಿದ್ದು, ಜನರ ಕಷ್ಟ - ಸುಖಕ್ಕೆ ಸ್ಪಂದಿಸುವುದಾಗಿ ಭರವಸೆ ನೀಡಿದರು. ತಾಲೂಕು ಅಧ್ಯಕ್ಷ ಜಿ.ನಂಜನಗೌಡ, ರಾಜ್ಯ ಪರಿಷತ್ ಸದಸ್ಯ ಆರುಂಡಿ ನಾಗರಾಜ, ಗಿರಿರಾಜ ರೆಡ್ಡಿ, ಎಂ.ಪಿ.ನಾಯ್ಕ, ಬಾಗಳಿ ಕೊಟ್ರ್‍ಏಶಪ್ಪ, ಓಂಕಾರ ಗೌಡ, ಡಾ.ರಮೇಶಕುಮಾರ್ ಇತರರು ಉಪಸ್ಠಿತರಿದ್ದರು. ನೀಲಗುಂದ, ಇಟ್ಟಿಗುಡಿ, ಕುಂಚೊರು ಸೇರಿದಂತೆ ಅನೇಕ ಗ್ರಾಮಗಳಲ್ಲಿ ಸಿದ್ದೇಶ್ವರ್ ಬಿರುಸಿನ ಪ್ರಚಾರ ಮಾಡಿದರು.
 
EVENTS
         
 
 
 
         
     AWARENESS AGAINST TERRORISM  
     
         
 
     
 
 
 
  VOTERS LIST
  Please click here to see your name in the voters list
  www.ceokarnataka.kar.nic.in
  www.eci.gov.in
  www.jaagore.com
 
 
Contact Us   |  Feedback Form  | Sitemap Privacy Policy  |  Legal Disclaimer
© Copyrights 2009 GM Siddeshwara, All Rights Reserved.